ಕಾರ್ಟ್‍ರೈಟ್, ವಿಲಿಯಂ

 1611-1643. ಪ್ರಾದ್ರಿ ಮತ್ತು ಆಂಗ್ಲ ನಾಟಕಕಾರ. ವಿದ್ಯಾಭ್ಯಾಸ ವೆಸ್ಟ್‍ಮಿನಿಸ್ಟರ್ ಶಾಲೆ ಮತ್ತು ಆಕ್ಸ್‍ಫರ್ಡ್‍ಗಳಲ್ಲಿ. ಬೆನ್ ಜಾನ್ಸನ್, ಹೆನ್ರಿ ವಾಹನ್, ಐಸಾಕ್ ವಾಲ್ಟನ್-ಇವರ ಸ್ನೇಹಿತನೀತ. ಕೆಲವು ಉತ್ತಮ ಕವನಗಳು ಹಾಗೂ ನಾಟಕಗಳನ್ನು ಬರೆದಿದ್ದಾನೆ. ವಿದ್ವಾಂಸ, ವಿನೋದ ಪ್ರಿಯ ಮತ್ತು ಉತ್ತಮ ನಾಟಕಕಾರನೆಂದು ತನ್ನ ಸಮಾಕಾಲೀನರ ಹೊಗಳಿಕೆಗೆ ಪಾತ್ರನಾಗಿದ್ದ. ದಿ ರಾಯಲ್ ಸ್ಲೇವ್, ದಿ ಸೀಜ್, ದಿ ಲೇಡಿ ಎರಂಟ್ ಈತನ ಉತ್ತಮ ನಾಟಕಗಳು.   

 (ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ